ಪ್ಯಾರಜೋವ
ಪ್ರಾಣಿರಾಜ್ಯಕ್ಕೆ ಸೇರಿದ ಒಂದು ಉಪರಾಜ್ಯ. ಕೆಲವೊಮ್ಮೆ ಇದನ್ನು ಮೆಟಜೋವ (ಬಹುಕೋಶ ಜೀವಿಗಳು) ಉಪರಾಜ್ಯದ ಒಂದು ಕವಲು ಎಂದು ಪರಿಗಣಿಸುವುದುಂಟು. ಇದು ಪೋರಿಫರ (ಸ್ಪಾಂಜಿಯೋರಿಯ ಅಥವಾ ಸ್ಪಾಂಜಿಯಾ) ವಿಭಾಗವನ್ನು ಒಳಗೊಂಡಿದೆ. ಈ ಉಪರಾಜ್ಯಕ್ಕೆ ಸೇರಿದ ಪ್ರಾಣಿಗಳ ಸಾಮಾನ್ಯ ಹೆಸರು ಸ್ಪಂಜುಗಳು. ಈ ಗುಂಪಿನಲ್ಲಿ ಪ್ಲಿಯೋಸ್ಪಾಂಜಿಯಾ (ಆಕ್ತಿಯೋಸಯಾತ), ಕ್ಯಾಲ್ಕೇರಿಯ, ಹೆಕ್ಸ್ಯಾಕ್ಟಿನೆಲಿಡೀ ಮತ್ತು ಡಮೋಸ್ಪಾಂಜಿಯೀ ಎಂಬ ನಾಲ್ಕು ವರ್ಗಗಳೂ ಇವೆಲ್ಲಕ್ಕೂ ಸೇರಿದಂತೆ ಒಟ್ಟು 8 ಗಣಗಳೂ ಸುಮಾರು 30 ಕುಟುಂಬಗಳೂ 5,000 ಕ್ಕೂ ಹೆಚ್ಚಿನ ಸಂಖ್ಯೆಯ ಪ್ರಬೇಧಗಳೂ ಉಂಟು. ಮೊದಲನೆಯ ವರ್ಗಕ್ಕೆ ಸೇರಿದ ಸ್ಪಂಜುಗಳು ಗತಾವಂಶಿಗಳಾದರೆ ಉಳಿದವು ಇಂದು ಜೀವಂತ ಕಾಣದೊರೆಯುತ್ತವೆ. ಎಲ್ಲ ಪ್ರಭೇೀದಗಳೂ ಜಲಜೀವಿಗಳೇ. ಸ್ಪಾಂಜಿಲಿಡೀ ಎಂಬ ಕುಟುಂಬದ ಸದಸ್ಯಗಳು ಸಿಹಿನೀರಿನಲ್ಲಿ ಜೀವಿಸುವುದಾದರೆ ಉಳಿದ ಎಲ್ಲ ಪ್ರಬೇಧಗಳೂ ಕಡಲ ವಾಸಿಗಳು.

ಮೇಲೆ ಹೇಳಿದಂತೆ ಪ್ಯಾರeóÉೂೀವ ಮೆಟeóÉೂೀವದ ಒಂದು ಪ್ರಮುಖ ಗುಂಪು. ಅಂತೆಯೇ ಇದರ ಸದಸ್ಯಗಳು ಬಹುಕೋಶ ಜೀವಿಗಳೇ. ಆದರೆ, ಒಂದು ಮುಖ್ಯ ವ್ಯತ್ಯಾಸ : ಮೆಟeóÉೂೀವದ ಉಳಿದೆಲ್ಲ ಗುಂಪುಗಳಲ್ಲಿ ಜೀವಕೋಶಗಳು ಬಹುಸಂಖ್ಯೆಯಲ್ಲಿರುವುದು ಮಾತ್ರವಲ್ಲ. ಅವು ಅಂಗಾಂಶಗಳಾಗಿ (ಊತಕಗಳು) ಕೂಡ ವ್ಯವಸ್ಥೆಗೊಂಡಿವೆ. ಪ್ಯಾರeóÉೂೀವಗಳಲ್ಲಾದರೊ ಕೋಶಗಳು ಸಡಿಲವಾಗಿ ಗುಂಪುಗೊಂಡಿವೆಯೇ ವಿನಾ ಅಂಗಾಂಶಗಳಾಗಿ ರೂಪುಗೊಂಡಿಲ್ಲ. ಆದ್ದರಿಂದ ಪ್ಯಾರeóÉೂೀವ ಗುಂಪನ್ನು ಮೆಟeóÉೂೀವದ ಅತಿ ಹಿಂದುಳಿದ ಗುಂಪೆಂದೂ ಅದರ ಸದಸ್ಯಗಳ ದೇಹಕೋಶ ಹಂತದಲ್ಲೇ ಉಳಿದುಬಿಟ್ಟಿದೆಯೆಂದು ಹೇಳಲಾಗುತ್ತದೆ. ಅದ್ದರಿಂದಲೇ ಮೆಟeóÉೂೀವದ ಮಿಕ್ಕ ಗುಂಪುಗಳನ್ನು ಯೂಮೆಟಜೋವ ಎಂಬ ಹೆಸರಿನಿಂದ ನಿರ್ದೇಶಿಸಲಾಗುತ್ತದೆ. 

ಪ್ಯಾರeóÉೂೀವದ ಪ್ರಾಣಿಗಳು ಸ್ಥಾವರ ಜೀವಿಗಳು. ನೀರಿನಲ್ಲಿರುವ ಕಲ್ಲುಬಂಡೆ ಮುಂತಾದ ಆಧಾರಗಳಿಗೆ ಅಂಟಿಕೊಂಡು ಬೆಳೆಯುತ್ತವೆ. ಆಕಾರದಲ್ಲಿ ವಿವಿಧ ರೂಪದವು, ದೇಹದಲ್ಲಿ ಅಂಗಾಂಶಗಳಾಗಲಿ, ಅಂಗರಚನೆಗಳಾಗಲಿ ಇಲ್ಲ. ಬಾಯಿ ಸಹ ಇಲ್ಲದಿರುವುದು ಇವುಗಳ ಒಂದು ವಿಚಿತ್ರ ಲಕ್ಷಣ. 

	ದೇಹದ ತುಂಬ ಸಹಸ್ರಾರು ಸೂಕ್ಷ್ಮರಂಧ್ರಗಳು ಉಂಟು ಇವಕ್ಕೆ ಆಸ್ಟಿಯ ಎಂದು ಹೆಸರು. ಬಾಹ್ಯರಂಧ್ರಗಳ ಮೂಲಕ ನೀರನ್ನು ಹೀರಿ ದೇಹದಲ್ಲಿನ ಕಾಲುವೆಗಳ ಮೂಲಕ ದೇಹಾಂತರದಲ್ಲಿನ ಅವಕಾಶಕ್ಕೆ ಹಾಯಿಸುವುದು (ದೇಹಾಂತರದಲ್ಲಿನ ಅವಕಾಶಕ್ಕೆ ಸ್ಪಾಂಗೋಸೀಲ್ ಎಂದು ಹೆಸರು). ಇಲ್ಲಿಂದ ನೀರನ್ನು ತ್ಯಾಜ್ಯರಂಧ್ರಗಳ ಮೂಲಕ ಹೊರಹಾಕುವುದು. ತ್ಯಾಜ್ಯರಂಧ್ರಗಳೇ ಅಸಿಕ್ಯೂಲ್ಸ್. ದೇಹದಲ್ಲಿನ ನಾಳಗಳ ವೈಖರಿ ಒಂದೊಂದು ಗುಂಪಿನಲ್ಲ ಒಂದೊಂದು ರೀತಿಯಲ್ಲಿದ್ದು ಸರಳ ರೂಪದಿಂದ ಹಿಡಿದು ಕ್ಲಿಷ್ಟರೂಪದ ನಾಳಗಳನ್ನು ಕಾಣಬಹುದು. 

	ದೇಹದ ಗೋಡೆಯಲ್ಲಿ ಅಸರಕ್ಕೆ ಸಹಾಯಕವಾಗುವಂಥ ಮೊನಚಾದ ರಚನೆಗಳನ್ನು ಕಾಣಬಹುದು. ಇವಕ್ಕೆ ಸ್ಪಿಕ್ಯೂಲುಗಳೆಂದು ಹೆಸರು. ಇವುಗಳಲ್ಲಿ ಎರಡು ವಿಧ. ಕೆಲವು ಕ್ಯಾಲ್ಸಿಯಂನಿಂದ ರೂಪುಗೊಂಡಿವೆಯಾದರೆ ಇನ್ನು ಕೆಲವು ಸಿಲಿಕದಿಂದ ರಚಿತವಾಗಿವೆ ಇನ್ನು ಕೆಲವು ಜಾತಿಯ ಸ್ಪಂಜುಗಳಲ್ಲಿ ಇವೆರಡೂ ಇಲ್ಲದೆ ನಾರಿನಂತೆ ಇರುವ ಸ್ಪಂಜಿನ 	ಫ್ಯೆಬರ್ ಇದೆ. ಅಲ್ಲದೆ ದೇಹದ ಗೋಡೆಯಲ್ಲಿ ವಿವಿಧ ಬಗೆಯ ಜೀವಕೋಶಗಳು ಸ್ವತಂತ್ರವಾಗಿ ವಿವಿಧ ಕಾರ್ಯಗಳಲ್ಲಿ ಪಾಲುಗೊಳ್ಳುತ್ತವೆ. ನಾಳಗಳಲ್ಲಿ ಅಥವಾ ನಾಳಗಳಲ್ಲಿನ ಅವಕಾಶಗಳಲ್ಲಿ ಪಟ್ಟಿಕೋಶಗಳು ಅಥವಾ ಕೊಯನೋಫ್ಲಾಜಿಲೇಟ್ ಕೋಶಗಳು ಇವೆ. ಇವು ಇದೇ ಈ ಗುಂಪಿಗೆ ಮಾತ್ರ ಸೀಮಿತವಾಗಿವೆ ಎಂಬುದು ಮುಖ್ಯ ವಿಷಯ. ದೇಹದ ಗೋಡೆಯಲ್ಲಿ ಹೊರಪದರ ಹಾಗೂ ಒಳಪದರಗಳುಂಟು. ನಾಳಗಳು ಇವೆರಡು ಪದರಗಳಿಗೆ ಮಾತ್ರ ಸೀಮಿತವಾಗಿವೆ. ಇನ್ನುಳಿದ ಭಾಗದಲ್ಲಿ ವಿವಿಧ ಜೀವಕೋಶಗಳು ಮತ್ತು ಸ್ಪಿಲುಳು ಇವೆ. ಆದರೂ ಈ ಪದರಗಳು ದ್ವಿಪದರ ಜೀವಿಗಳಲ್ಲಿರುವಂತೆ ಅಲ್ಲ ಎಂದು ತಜ್ಞರ ಅಭಿಪ್ರಾಯ. ಇದಕ್ಕೆ ಕಾರಣ ಜೀವಿಯಲ್ಲಿರುವ ಪ್ರತಿಯೊಂದು ಜೀವಕೋಶವೂ ಸ್ವಯಾರ್ಜಿತವಾಗಿ (ಏಕಕಣಜೀವಿಯಂತೆ) ಜೀವಿಸುವುದು.

	ಪ್ಯಾರeóÉೂೀವದ ಪ್ರಾಣಿಗಳಲ್ಲಿ ಬಾಯಿ ಇಲ್ಲ. ಸೇವಿಸಿದ ಆಹಾರವನ್ನು ಜೀರ್ಣಸಿಕೊಳ್ಳಲು ಜೀರ್ಣಾಂಗಗಳಿಲ್ಲ. ಆದರೂ ದೇಹದ ಹೊರಭಾಗದಲ್ಲಿರುವ ರಂಧ್ರಗಳ ಮೂಲಕ ನೀರನ್ನು ಹೀರುವಾಗ ಅದರ ಜೊತೆಗೆ ಹಾದು ಬರುವ ಸೂಕ್ಷ್ಮಜೀವಿಗಳನ್ನು ನಾಳದಲ್ಲಿರುವ ಜೀವಕೋಶಗಳು ಕಬಳಿಸಿ, ಪ್ರತಿ ಕೋಶದ ಅಂತರ್Àಗತದಲ್ಲಿ ಜೀರ್ಣಿಸಿಕೊಳ್ಳುವುವು. ನಾಳಗಳಲ್ಲಿನ ಪಟ್ಟಿಕೋಶಗಳು ತಮ್ಮ ಶಿಲಕೆಯನ್ನು ಬಡಿಯುವುದರಿಂದ ನೀರು ಇಡೀ ದೇಹದಲ್ಲಿ ಹರಿಯುತ್ತದೆ. ಈ ಬಗೆಯ ಜೀರ್ಣಶಕ್ತಿಯನ್ನು ಅಂತರ್ಗತ ಪಚನಶಕ್ತಿ ಎನ್ನಬಹುದು.

	ಸ್ಪಂಜು ಪ್ರಾಣಿಗಳಲ್ಲಿ ನರಗಳಾಗಲೀ, ನರತಂತುಗಳಾಗಲೀ, ನರಕೋಶಗಳಾಗಲೀ ಇಲ್ಲದಿರುವುದು ಒಂದು ಮುಖ್ಯಅಂಶ. ಆದರೂ ಹಲವಾರು ಬಗೆಯ ಸಂವೇದನೆಗಳಿಗೆ ಇವು ಪ್ರತಿಕ್ರಿಯೆ ತೋರುವುವು.

	ಇವುಗಳಲ್ಲಿ ಸಂತಾನೋತ್ಪತ್ತಿ ಅಂಗಗಳಿಲ್ಲ. ಆದರೂ ವಿವಿಧ ರೂಪದ ಜೀವಕೋಶಗಳ ಪೈಕಿ ಕೆಲವು ಕೋಶಗಳು ಮಾರ್ಪಾಟಾಗಿ ಸಂತಾನೋತ್ಪತ್ತಿಯ ಕೋಶಗಳಾಗಿ ಪರಿವರ್ತನೆಯಾಗಿ ಲೈಂಗಿಕ ಅಣುಗಳಾಗುವುವು. ಇವೆರಡೂ ಬಗೆಯ ಕೋಶಗಳು ಒಂದೇ ಸ್ಪಂಜು ದೇಹದಿಂದ ಬರಬಹುದು ಅಥವಾ ಬೇರೆ ಬೇರೆ ಜೀವಿಗಳಿಂದ ಬರಬಹುದು. ಇವುಗಳಲ್ಲಿ ಸಂತಾನೋತ್ಪತ್ತಿ ಲಿಂಗರೀತಿಯಿಂದಲೇ ಅಲ್ಲದೆ ಅಲಿಂಗ ಅಥವಾ ನಿರ್ಲಿಂಗ ರೀತಿಯಿಂದಲೂ ಸಾಧ್ಯ. ನಿರ್ಲಿಂಗ ರೀತಿಯ ಪ್ರಜನನ ಮೊಗ್ಗೆಯೊಡೆಯುವಿಕೆಯಿಂದಲೂ ಅಂಕುರಾಗ್ರಗಳ ಮೂಲಕವೂ ಆಗಬಹುದು. 

	ಇವುಗಳ ಜೀವನಚರಿತ್ರೆಯಲ್ಲಿ ಅಂದರೆ ಲಿಂಗರೀತಿಯಿಂದ ಯುಗ್ಮವಾಗಿ ಬೆಳೆಯುವ ಹಂತದಲ್ಲಿ ಮರಿರೂಪವನ್ನು ತಾಳಿ ಅನಂತರದ ಬದಲಾವಣೆಗಳು ನಡೆದು ವಯಸ್ಕ ಜೀವಿಗಳಾಗಿ ಬೆಳೆಯುವುವು. ಸ್ಪಂಜುಗಳಲ್ಲಿ ಕೆಲವು ಮಾತ್ರ ಸಿಹಿನೀರಿನಲ್ಲಿ ಸಿಗುವುವು. ಗಾತ್ರದಲ್ಲಿ ಇವು ಸೂಕ್ಷ್ಮವಾಗಿರಬಹುದು ಅಥವಾ ಬಂಡೆಗಳಂತೆ ವಿವಿಧ ವಿನ್ಯಾಸಗಳನ್ನು ಹೊಂದಿರಬಹುದು.
ಇವು ಸಮುದ್ರದಲ್ಲಿ ಕೆಲವು ದಂಡೆಗೆ ಹತ್ತಿರ ಜೀವಿಸಿದರೆ ಕೆಲವು ತೀರದಿಂದ ಮೂರು ಮೈಲಿ ದೂರದಲ್ಲಿ ಜೀವಿಸುತ್ತವೆ. 
ಮೇಲೆ ತಿಳಿಸಿದ ಲಕ್ಷಣಗಳ ಅಧ್ಯಯನ ಮಾತ್ರವಲ್ಲದೆ ಈ ಗುಂಪಿನ ಸ್ಥಾನಮಾನಗಳ ವಿಶ್ಲೇಷಣೆಯೂ ಮುಖ್ಯ. ಈ ಗುಂಪಿನ ಜೀವಿಗಳು ಸಮುದ್ರವಾಸಿಗಳು, ಬಾಹ್ಯ ರಂಧ್ರಗಳನ್ನು, ಕಾಲುವೆಗಳನ್ನು. ತಾಜ್ಯರಂಧ್ರಗಳನ್ನು, ದೇಹದ ಆಸರೆಗೆ ಸ್ಪಿಕ್ಯೂಲ್ಸ್‍ಗಳನ್ನು ವಿವಿಧ ರೂಪದ ಜೀವಕೋಶಗಳನ್ನು ಅನೇಕ ಜೈವಿಕ ಕಾರ್ಯಕ್ಕೆ ಬಳಸಿಕೊಳ್ಳುವುವು. ಯಾವುದೇ ಅಂಗಾಂಗಗಳು ಇಲ್ಲದಿರುವುದರಿಂದಲೂ, ಅದ್ಭುತ ಸಂತಾನಶಕ್ತಿ ಇರುವುದರಿಂದಲೂ, ಇಡೀ ಪ್ರಾಣಿಜಗತ್ತಿನಲ್ಲಿ ಇವಕ್ಕೆ ವಿಶಿಷ್ಟ ಸ್ಥಾನವುಂಟು. 

	ನಿಜಕ್ಕೂ ಇವು ಏಕಕಣಜೀವಿಗಳಿಗಿಂತ ಉತ್ತಮಮಟ್ಟವನ್ನು ತಲಪಿವೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇವು ದ್ವಿಪದರ ಕುಟುಕುಕಣವಂತ ಜೀವಿಗಳಿಗಿಂತ ಹಿಂದುಳಿದವು ಎಂದರೆ ತಪ್ಪಾಗದು, ಇದಕ್ಕೆ ಕಾರಣ ಇವು ಬಹುಕಣ ಜೀವಿಗಳಾಗಿದ್ದರೂ ದೇಹದ ಪ್ರತಿಯೊಂದು ಜೀವಕೋಶ ಇನ್ನೊಂದು ಜೀವಕೋಶದ ಅಧೀನದಲ್ಲಿಲ್ಲದಿರುವುದು. ಈ ಕಾರಣಕ್ಕಾಗಿಯೇ ಹಕ್ಸಲೀ ಇವು ಏಕಕಣಜೀವಿಗಳೂ ಅಲ್ಲ. ಬಹುಕಣಜೀವಿಗಳೂ ಅಲ್ಲ. ಇವೆರಡರ ಮಧ್ಯೆ ಇರಬೇಕಾದ ಜೀವಿಗಳೆಂದು ಅಭಿಪ್ರಾಯ ಪಡುತ್ತಾನೆ.

	ಇವುಗಳಲ್ಲಿ ಕಾಣಬರುವ ಸ್ಪಿಕ್ಯೂಲ್, ಪಟ್ಟಿಕೋಶಗಳು ಮತ್ತು ಕಾಲುವೆಗಳು ಮತ್ತು ಇವುಗಳ ವೈವಿಧ್ಯ. ಈ ಗುಂಪಿಗೆ ಮಾತ್ರ ಸೀಮಿತವಾಗಿರುವುದರಿಂದ ಇವನ್ನು ಬೇರೆ ಗುಂಪಿಗೆ ಸೇರಿಸಲಾಗದು.

	ಇವುಗಳ ಉದ್ಭವ ಯಾವಾಗ ಆಗಿರಬಹುದೆಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಕಾರಣ ಪಳೆಯುಳಿಕೆಗಳ ಆಧಾರವಿಲ್ಲದಿರುವುದು. ಆದರೂ ಇವು ಏಕಕಣಜೀವಿಗಳಿಂದ ಗತಕಾಲದಲ್ಲಿ ವಿಕಾಸ ಹೊಂದಿರಬಹುದೆಂಬ ವಾದಕ್ಕೆ ಪುಷ್ಟಿ ಸಿಕ್ಕಿದೆ. ಅಲ್ಲದೆ ಇವು ತಮ್ಮ ತಮ್ಮಲ್ಲಿಯೇ ವಿವಿಧ ರೀತಿಯಲ್ಲಿ ಮಾರ್ಪಾಟಾಗಿ ಹಲವಾರು ಬಗೆಯ ಸ್ಪಂಜುಗಳಾಗಿ ರೂಪುಗೊಂಡಿವೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಮುಂದೆಯೂ ಇವು ವಿಕಾಸಗೊಳ್ಳುವ ಸೂಚನೆಯನ್ನು ತೋರಿಸುತ್ತಿಲ್ಲ ಎಂದೂ ವಾದಿಸುತ್ತಾರೆ. 
(ಜಿ.ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ